ಹಾಸನಾಂಬೆ

- ದ್ಯಾವನೂರು ಮಂಜುನಾಥ್,  9482827228



ಹಾಸನದ ಶಕ್ತಿ ದೇವತೆ ಹಾಸನಾಂಬೆ. ಈಕೆಯನ್ನು ಹಾಸನಮ್ಮ ಸಪ್ತಮಾತೃಕೆ ಎಂದು ಕರೆಯುವರು. ಹಾಸನಾಂಬೆ ಹಾಸನದ ಗ್ರಾಮ ದೇವತೆ ಎಂಬುದನ್ನು ಜನಪದರು ಹೀಗೆ ಹೇಳುತ್ತಾರೆ.
 ಹಾಸನಾಂಬೆ
ಈಗ ಕೋಲಾ ಹೊಡೆದು ಈ ಗ್ಯಾನ ನೆನೆದೇವು
ಈ ಊರ ಗ್ರಾಮದ ತಾಯಿಯ ಕೋಲೆ
ಈ ಊರ ಗ್ರಾಮದ ತಾಯಿ ಹಾಸನಾಂಬೆಯ
ಈಗ ಕೋಲ್ಹೊಡೆದು ನೆನೆದೇವು ಕೋಲೆ

ಸ್ಥಳನಾಮ
ಕರ್ನಾಟಕ ಸರ್ಕಾರವು ಪ್ರಕಟಿಸಿರುವ Hassan Gazetteer According to the Sthalapurana the name of Hassan is a construction or derivative of Simhasanapura associated with JanameJaya  a great grandson of the Pandava hero Arjunaಎಂದಿದೆ. ಇದರ ಅರ್ಥ ಮಹಾಭಾರತದ ಕಾಲದಲ್ಲಿ ಅರ್ಜುನನ ಮೊಮ್ಮಗ ಜನಮೇಜಯ ಶಾಪಗ್ರಸ್ಥನಾಗಿದ್ದ ಕಾಲದಲ್ಲಿ ಇಲ್ಲಿ ನೆಲೆಸಿದ್ದ. ಆಗ ಈ ಸ್ಥಳಕ್ಕೆ ಸಿಂಹಾಸನಪುರಿ ಎಂದು ಹೆಸರಿತ್ತು. ನಂತರ ಸಿಂಹಾಸನಪುರ ಆಡು ಮಾತಿನಿಂದ ಹಾಸನ ಎಂದಾಗಿದೆ ಎಂದು ನಂಬಲಾಗಿದೆ.
ಇನ್ನೊಂದು ಸ್ಥಳ ಪುರಾಣದ ಪ್ರಕಾರ ಹಾಗೂ ಜನಪ್ರೀಯ ನಂಬಿಕೆ ಪ್ರಕಾರ ‘Hassan Gazetteer’ ನಲ್ಲಿರುವಂತೆ “Hassan ofter the goddess Hasanamma or Hasanamba means in kannada a smiling mother or goddess in this connection a traditional story as a how the Goddess Hasanamba came to be established at this place is narreted thus the Saptamatrika seven mothers or goddes in the course of this journy from Varanasi  (Kashi) to the south were pleased with the scenic splendor of this area and decided to make it three setteled at Hassan and other three in a tank called devigere also in Hassan proper and were Hasanamba while the other one seteled in a forest near Kenchamma – Hosakote in Alur taluk and was called Kenchambaಇದರ ಅರ್ಥ ಸಪ್ತಮಾತೃಕೆಯರಾದ ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕುಮಾರಿ, ಬ್ರಾಹ್ಮೀದೇವಿ, ವರಾಹಿ ಮತ್ತು ಚಾಮುಂಡಿ ವಾರಣಾಸಿ ಕಡೆಯಿಂದ ದಕ್ಷಿಣದ ಕಡೆಗೆ ವಿಹಾರಕ್ಕೆ ಬಂದಾಗ ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಇಲ್ಲೇ ನೆಲೆಸಲು ನಿರ್ಧರಿಸಿದರು. ಅವರುಗಳಲ್ಲಿ ವೈಷ್ಣವಿ, ಕುಮಾರಿ, ಮಹೇಶ್ವರಿಯರು ಹಾಸನಾಂಬ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ಹಾಗು ಬ್ರಾಹ್ಮೀದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸಿದಳು. ಇನ್ನುಳಿದ ದೇವತೆಯರಾದ ಚಾಮುಂಡಿ, ವರಾಹಿ, ಇಂದ್ರಾಣಿ ನಗರ ಮಧ್ಯ ಭಾಗದ ದೇವಿಗೆರೆಯ ಬಳಿನೆಲೆಸಿದರು ಎನ್ನಲಾಗಿದೆ. ಸಪ್ತಮಾತೃಕೆಯರು ಸದಾ ನಗುವ ದೇವರೆಯರಾಗಿದ್ದಾರೆ ಹಾಗಾಗಿ ನಸುನಗುವ ದೇವತೆಗಳು ನೆಲೆಸಿರುವುದರಿಂದ ಹಸನ, ಹಾಸನವಾಗಿದೆ
ಐತಿಹಾಸಿಕವಾಗಿ ಈ ಸ್ಥಳವನ್ನು ಮೌರ್ಯರ ನಂತರ ಚೋಳ ಅರಸರ ಅಧಿಪತಿಯಾದ ಬುಕ್ಕ ನಾಯಕ ಮತ್ತು ಅವನ ವಂಶಸ್ಥರು ಕ್ರಿ..ಸುಮಾರು 11ನೆಯ ಶತಮಾನದಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಆಳಿದರು ಎಂದು ತಿಳಿದು ಬರುತ್ತದೆ. ಹೊಯ್ಸಳರಿಗೂ ಪೂರ್ವ ಕಾಲದಲ್ಲಿ ಇದು ಗಂಗರ ಆಡಳಿತಕ್ಕೆ ಒಳಪಟ್ಟಿತ್ತು. ಬುಕ್ಕ ನಾಯಕ ತನ್ನ ವಿಜಯೋತ್ಸವ ನೆನಪಿಗಾಗಿ ಒಂದು ಕೋಟೆಯನ್ನು ಕಟ್ಟಿ ಆ ಸ್ಥಳಕ್ಕೆ ಚನ್ನಪಟ್ಟಣ (ಚೆಲುವಾದ ಪಟ್ಟಣ)ಎಂದು ಹೆಸರಿಟ್ಟನಂತೆ. ಬುಕ್ಕ ನಾಯಕನ ನಂತರ 12ನೆಯ ಶತಮಾನದಲ್ಲಿ ಕೃಷ್ಣಪ್ಪನಾಯಕ ಎಂಬ ಪಾಳೇಗಾರನಿಗೆ ಸೇರಿತ್ತು.
ಈ ನಾಯಕ ಒಮ್ಮೆ ಪ್ರಯಾಣ ಹೊರಟಾಗ ಒಂದು ಮೊಲ ಅಡ್ಡ ಬಂದು ಪಟ್ಟಣವನ್ನು ಪ್ರವೇಶಿಸಿತು. ಈ ಅಪಶಕುನದಿಂದ ನಾಯಕ ನೋಂದುಕೊಂಡನಂತೆ. ಆಗ ಅವನಿಗೆ ಹಾಸನಾಂಬೆ ಪ್ರತ್ಯಕ್ಷಳಾಗಿ, “ಮಗು ಖಿನ್ನ ಮನಸ್ಸು ತೋರೆದು ಈ ಸ್ಥಳದಲ್ಲಿ ಒಂದು ಕೋಟೆಯನ್ನು ಕಟ್ಟುಎಂದು ಹೇಳಿದಳಂತೆ. ಹಾಗೇ ಒಂದು ಕೋಟೆಯನ್ನು ಕಟ್ಟಿ ಅದಕ್ಕೆ ಹಾಸನಾಂಬೆ ಎಂಬ ಹೆಸರಿಟ್ಟನೆಂದು ಹಾಸನ ತಾಲ್ಲೂಕಿನ ಕುದುರುಗುಂಡಿ ಗ್ರಾಮದಲ್ಲಿರುವ ಕ್ರಿ..1140ರ ವೀರಗಲ್ಲಿನ ಶಿಲಾ ಶಾಸನದಿಂದ ತಿಳಿದು ಬರುತ್ತದೆ.
ಇನ್ನೊಂದು ದಂತ ಕಥೆಯ ಪ್ರಕಾರ ಹಾಸನ ಒಂದು ದೊಡ್ಡ ಕಾಡಂತೆ. ಇಲ್ಲಿಗೆ ಪಕ್ಕದ ಪಟ್ಟಣವಾದ ಚನ್ನಪಟ್ಟಣದ ದನಗಳೆಲ್ಲಾ ಒಂದು ಮೇಯುತ್ತಿದ್ದಂತೆ. ಆ ಹಸುಗಳಲ್ಲಿ ಒಂದು ಪ್ರತಿ ದಿನ ಸಂಜೆಯ ಸಮಯದಲ್ಲಿ ಈ ಕಾಡಿನ ಒಂದು ಹುತ್ತದ ಮೇಲೆ ಹಾಲು ಸುರಿಸುತ್ತಿತ್ತಂತೆ. ಮನೆಯಲ್ಲಿ ಕರೆದರೆ ಹಾಲಿನ ಬದಲು ಬರೀ ರಕ್ತ ಬರುತ್ತಿತ್ತಂತೆ ಪ್ರತಿ ದಿನ ಯಾರು ಹಾಲನ್ನು ಕರೆದುಕೊಳ್ಳುತ್ತಿದ್ದಾರೆಂಬ ಅನುಮಾನದಿಂದ ಗಮನಿಸಿದಾಗ ವಾಸ್ತವದ ಸಂಗತಿ ತಿಳಿದು, ಆ ವಿಷಯವನ್ನು ಪಾಳೇಗಾರ ಕೃಷ್ಣಪ್ಪ ನಾಯಕನಿಗೆ ತಿಳಿಸಿದರಂತೆ. ಆಗ ಇದೇನು ಆಶುಭ ಎಂದು ಚಿಂತೆಯಲ್ಲಿರುವಾಗ ದೇವಿಯು ಆತನ ಕನಸಿನಲ್ಲಿ ಬಂದು, ಇಲ್ಲಿ ಒಂದು ಕೋಟೆಯನ್ನು ಕಟ್ಟುವಂತೆ ಹೇಳಿದಾಗ, ಆತ ಒಂದು ಕೋಟೆಯನ್ನು ಕಟ್ಟಿಸಿದನು. ಹಸುವು ಹಾಲು ಸೂಸುತ್ತಿದ್ದುದರಿಂದ ಈ ಸ್ಥಳಕ್ಕೆ ಹಸುವಿನ ಕೋಟೆ > ಹಸನ ಕೋಟೆ > ಹಾಸನ ಕೋಟೆ > ಹಾಸನ ಎಂಬ ಹೆಸರು ಬಂದಿದೆ ಎನ್ನಲಾಗಿದೆ.
ಇಷ್ಟೇ ಅಲ್ಲದೆ, ಮತ್ತೊಂದು ದಂತ ಕಥೆಯಿದ್ದು ಈ ಕಥೆಯಲ್ಲಿನ ಕುತೂಹಲದ ಸಂಗತಿ ಎಂದರೆ, ಈ ಕೋಟೆಯ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ವಾಸವಿದ್ದರು. ಇವರು ಈ ದೇವತೆಯನ್ನುಹಸನ್ ಬೀಎಂದು ಕರೆಯುತ್ತಿದ್ದರು. ಇದು ಮುಸ್ಲಿಂ ದೇವತೆಯೆಂದು ಸಹ ಹೇಳುತ್ತಾರೆ. ಇವರು ಹೇಳುವಂತೆ ಸೂಸೆಗೆ ಕಿರುಕುಳ ಕೊಡುತ್ತಿದ್ದ ಅತ್ತೆಯ ಕಾಟವನ್ನು ತಡೆಯುವುದಕ್ಕೆ ಆಗದೆ ದೇವಾಲಯದೊಳಗೆ ಹೋಗಿ ಬಾಗಿಲು ಮುಚ್ಚಿಕೊಂಡು ಅಲ್ಲೇ ಲೀನವಾಗಿ ಹೋದಳು. ನಂತರ ಒಂದು ವರ್ಷದ ಬಳಿಕ ಬಾಗಿಲು ತೆರೆದರೆ ಅವಳ ಸುತ್ತಲೂ ಹುತ್ತ ಬೆಳೆದಿತ್ತು. ಜೋತೆಗೆ ಒಂದು ದೀಪ ಸಹ ಉರಿಯುತ್ತಿತ್ತು. ಹೀಗೆ ದೇವತೆಯಾದಳು. ಅವಳೇ ಹಸನ್ ಬೀ. ಈ ಹಸನ್ ಬೀಯ ಸಮಾಧಿ ಒಳಗಡೆ ಇದೆ ಎಂಬ ನಂಬಿಕೆಯಿದೆ. ಈ ಹಾಸನ್ ಬೀ ಎಂಬ ಪದ ಕಾಲದ ರಭಸಕ್ಕೆ ಸಿಲುಕಿ ಹಾಸನ್ ಬೀ > ಹಾಸನ ಬೀ > ಹಸನಬಿ > ಹಾಸನಾಂಬೆ > ಹಾಸನ ದು ಆಗಿರಬಹುದು ಎನ್ನಲಾಗುತ್ತದೆ.
ಆದರೆ ಈ ಮೇಲಿನ ಎಲ್ಲಾ ಕಥೆಗಳಿಗೆ ಯಾವುದೇ ರೀತಿಯ ಸಮರ್ಪಕವಾದ ಆಧಾರಗಳಿಲ್ಲ. ಹೀಗೆ ಹಾಸನ ಎಂಬ ಪದದ ಸುತ್ತ ಕಥೆಗಳು ಸೃಷ್ಟಿಯಾಗಿ ಮೂಲ ತಿಳಿಯದೇ ಹೋಗಿದೆ. ಬ್ರಿಟಿಷ್ ಅಧಿಕಾರಿಯೊಬ್ಬನಿಗೆ ಸಿಂಹಾಸನಪುರಿ ಎಂದು ಉಚ್ಚರಿಸಲು ಆಗುತ್ತಿರಲಿಲ್ಲ. ಆಗಸಿಂಮತ್ತುಪುರಿಎರಡನ್ನು ತೆಗೆದು ಹಾಕಿ ಬರೀ ಹಾಸನ ಎಂದು ಕರೆದನು ಎಂದು ಸಹ ಹೇಳುತ್ತಾರೆ.
ಕಥೆಗಳು ಏನೇ ಇರಲಿ, ಹಾಸನಕ್ಕೆ ಹಿಂದೆ ಇದ್ದಂತಹ ಹೆಸರು ಹಾಸನ ಎಂದೇ. ಎಪಿಗ್ರಾಯ ಕರ್ನಾಟಿಕ ಸಂಪುಟ ಎಂಟರಲ್ಲಿರುವ ಹಾಸನ ತಾಲ್ಲೂಕಿನ ಶಾಸನ ಸಂಖ್ಯೆ 1 (V ಹಾ 1) ಮತ್ತು 2 (V ಹಾ 2) ಇವುಗಳಲ್ಲಿಹಾಸನಎಂದೇ ಉಲ್ಲೇಖವಿದೆ. ಹಾಸನವು ಸತ್ಯಮಂಗಲ ಕೆರೆ, ಬೀರನಹಳ್ಳಿಕೆರೆ, ಹುಣಸಿನಕೆರೆ, ಕಟ್ಟಿನಕೆರೆ, ದೇವಿಗೆರೆ, ಚನ್ನಪಟ್ಟಣಕೆರೆ, ಮಾಕನಕೆರೆ ಹೀಗೆ ಸುತ್ತಲೂ ನೀರಿನಿಂದಾವೃತವಾದ ಗುಡ್ಡ ಪ್ರದೇಶ ಭಾಷಿಕವಾಗಿ ಅಸೆ+ವನ=ಅಸ್ವೆಣ. ಅಸೆ ಎಂದರೆ ದ್ರಾವಿಡ ಭಾಷೆಯಲ್ಲು ನೀರೆಂಬ ಅರ್ಥವಿದೆ. ಅದೇ ಅಣ್ಪೆ ಎಂಬ ತಮಿಳು ಪಡ ಗುಡ್ಡ, ದಿಬ್ಬ ಪರ್ವತ , ಶಿಖರ ಎಂಬ ವಿವರಗಳನ್ನು ನೀಡುತ್ತದೆ. ನೀರಿನಿಂದಾವೃತವಾದ ಹಚ್ಚ ಹಸಿರಿನ ಗುಡ್ಡ ಪ್ರದೇಶವೇ ಹಾಸನವಾಗಿದೆ. ವಾಸ್ತಬಿಕ ನೆಲೆಗಟ್ಟಿನಲ್ಲಿ ನೋಡಿದರೆ, ಹಾಸನಕ್ಕೆ ಹಿಂದೆ ಅಸೆವನ > ಅಸವನ > ಹಸವನ > ಹಸನ > ಹಾಸನ ಎಂದು ಬಂದಿರುವುದುನ್ನು ಸ್ಥೂಲವಾಗಿ ನಂಬಬಹುದಾಗಿದೆ. ಬ್ರಿಟಿಷರ ಕಾಲದಲ್ಲಿ ಇಂಗ್ಲಿಷ್ ಭಾಷೆಯ ಪ್ರಭಾವದಿಂದ ಹಾಸನ ಎನ್ನುವುದು ಹಾಸ್ಸನ್ (Hassan) ಅಥವಾ ಹಾಸನ್ ಎಂದಾಯಿತು. ಆದರೆ ಇದನ್ನು ಕೆಲವರು ಹಾಸನ ಎಂದು ಮತ್ತಿ ಕೆಲವರು ಹಾಸನ್ ಎಂದು ಉಚ್ಚರಿಸುತ್ತಾರೆ.
ಮಾತೃ ಪ್ರಧಾನ ಸಂಸ್ಕೃತಿಯ ಶಕ್ತಿ ದೇವತೆಯಾದ ಹಾಸನದ ಅಮ್ಮನಿಗೆ ಬ್ರಾಹ್ಮಣರು, ವೀರಶೈವರು, ಒಕ್ಕಲಿಗರು, ಕುರುಬರು, ತಳವಾರರು, ಮುಸ್ಲಿಮರು, ಕ್ರೈಸ್ತರು, ದಲಿತರಾದಿಯಾಗಿ ಎಲ್ಲರೂ ನಡೆದುಕೊಳ್ಳುತ್ತಾರೆ. ಹಾಸನವನ್ನು ಈಗಲೂ ಸುತ್ತಮುತ್ತಲಿನ ಜನಹಾಸನ ಕೋಟೆಯಂತಲೇ ಕರೆಯುವುದು ವಾಡಿಕೆ.
ದೇವಿಯ ದರ್ಶನ
ಹಾಸನಾಂಬ ದೇವಾಲಯವನ್ನು ಪಾಳೇಗಾರರ ಕಾಲದಲ್ಲಿ (12ನೆಯ ಶತಮಾನ) ವಿರ್ಮಿಸಲಾಗಿದ್ದು ಹಾಸನಾಂಬೆ ದೇವಿಯು ಹುತ್ತದ ರೂಪದಲ್ಲಿ ನೆಲೆಸಿರುವುದನ್ನು ಕಾಣಬಹುದು. ಹಾಸನಾಂಬೆಯನ್ನು ಕುಂಭಗಳ ರೂಪದಲ್ಲಿ ಸಾಂಕೇತಿಕವಾಗಿ ಪ್ರತಿಷ್ಠಾಪಿಸಲಾಗಿದೆ. ಈ ಕುಂಭಗಳಿಗೆ ಹೆಣ್ಣು ದೇವತೆಗಳಂತೆ ಮುಖವಾಡಗಳನ್ನು ಮಾಡಿ ಅಲಂಕರಿಸಲಾಗಿದೆ.
ಹಾಸನಾಂಬ ದೇವಿಯ ದರ್ಶನವನ್ನು ಭಕ್ತರು ಸದಾ ಕಾಲ ಪಡೆಯಲು ಸಾಧ್ಯವಿಲ್ಲ. ವರ್ಷಕ್ಕೊಮ್ಮೆ ಆಶ್ವೀಜ ಮಾಸ ಪೂರ್ಣಿಮೆಯ ನಂತರ ಬರುವ ಗುರುವಾರದಂದು ಬಾಗಿಲು ತೆರೆದರೆ, ಬಲಿಪಾಢ್ಯವಿಯ ಮಾರನೇ ದಿನ ಬಾಗಿಲನ್ನು ಮುಚ್ಚುಲಾಗವುದು. ಬಾಗಿಲು ಮುಚ್ಚುವ ದಿನ ಹಚ್ಚಿದ ದೀಪವು ಮುಂದಿನ ವರ್ಷ ಬಾಗಿಲು ತೆರೆಯುವ ತನಕ ಗರ್ಭಗುಡಿಯಲ್ಲಿ ಉರಿಯುವುದು. ಹಾಗೆ ದೇವಿಗೆ ಮುಡಿಸಿದ ಹೂ ಬಾಡಿರುವುದಿಲ್ಲ. ಇಟ್ಟ ಅನ್ನ ಆರಿರುವುದಿಲ್ಲ. ಇದು ಹಾಸನಾಂಬೆ ದೇವಿಯ ವಿಶೇಷ ಮಹಿಮೆ ಹಾಗೂ ದೇವಾಲಯದಲ್ಲಿ ನಡೆದು ಬಂದಿರುವ ಪ್ರತೀತಿ.
ಮೊದಲ ದಿನ
ಹಾಸನಾಂಬ ದೇವಿಯ ಬಾಗಿಲು ತೆರೆಯುವ ಸಮಯದಲ್ಲಿ ದೇಶದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಕಿಕ್ಕಿರಿದು ಬರುತ್ತಾರೆ. ಆ ಭಕ್ತರ ಸಂಭ್ರವದ ನೋಟವು ಜಾತ್ರೆಯಂತೆ ಕಾಣುವುದು. ಬಾಗಿಲನ್ನು ತೆರೆಯುವ ದಿವಸ ಎಲ್ಲಾ ತಳವಾರ ಮನೆತನದವರು ಹಾಜರಿದ್ದು ದೇವಿಯ ಗರ್ಭಗುಡಿಯ ಮುಂದೆ ಬಾಳೆ ಕಂದನ್ನು ಅರಸು ಮನೆತನದವರಿಂದ ನೆಟ್ಟು ದೇವಿಯನ್ನು ಭಜಿಸುತ್ತ ಅರಸು ಮನೆತನದವರಾದ ನರಸಿಂಹರಾಜು ಅರಸು ಬಾಳೆ ಕಂದನ್ನು ಕತ್ತರಿಸಿದ  ನಂತರವೇ ದೇವಾಲಯದ ಬಾಗಿಲನ್ನು ತೆರೆಯುವುದು ಮೊದಲಿನಿಂದಲೂ ರೂಢಿಯಲ್ಲಿದೆ.
ಗರ್ಭಗುಡಿಯ ಬಾಗಿಲನ್ನು ತೆರೆದ ಕೂಡಲೇ ಭಕ್ತರು ಹಾಸನಾಂಬೆಯ ದರ್ಶನ ಮಾಡಬಾರದು ಅದರಿಂದ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಜನರ ನಂಬಿಕೆಯಾಗಿದೆ. ಆ ಕಾರಣಕ್ಕೆ ದೃಷ್ಟಿ ನಿವಾರಣೆಗೆ ಬಾಳೆ ಮರವನ್ನು ಕಡಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡುವುದು ಸಂಪ್ರದಾಯ.
ಮೊದಲನೆಯ ದಿನ ಅಮ್ಮನವರಿಗೆ ಯಾವುದೇ ರೀತಿಯ ಆಭರಣ, ವಸ್ತ್ರಗಳ ವಿನ್ಯಾಸವಿರುವುದಿಲ್ಲ. ಭಕ್ತರಿಗೆ ಮುಕ್ತ ದರ್ಮ ದರ್ಶನಕ್ಕೆ ಅವಕಾಶವಿರುತ್ತದೆ. ಎರಡನೆಯ ದಿನದಿಂದ ದೇವಿಯ ಆಭರಣ ವಸ್ತಗಳನ್ನು ಜಿಲ್ಲಾ ಖಜಾನೆ(ಟ್ರೆಜರಿ)ಯಿಂದ ಪಲ್ಲಕ್ಕಿಯೊಂದಿಗೆ ದೇವಾಲಯಕ್ಕೆ ತಂದು ನಂತರ ವಿಜೃಂಭಣೆಯಿಂದ ಪೂಜೆ ಹಾಗೂ ನೈವೇದ್ಯ ಅರ್ಪಿಸಲಾಗುವುದು. ದೇವಿಯ ವಸ್ತ್ರಗಳನ್ನು ಹುಣಸಿನ ಕೆರೆಯಲ್ಲಿರುವ ಮಡಿವಾಳರು ಒಗೆದ ನಂತರ ಪುರೋಹಿತರು ಮಡಿಯಿಂದ ಅಮ್ಮನವರ ಮೀಸಲು ಮನೆಯಲ್ಲಿ ನಮಸ್ಕರಿಸಿ ಇಡುವರು.
ಚಂದ್ರ ಬಟ್ಟಲಿನ ಶಿಲ್ಪ
ಪ್ರತಿ ನಿತ್ಯ ಸೊಸೆಗೆ ಕಿರುಕುಳ ಕೊಡುತ್ತಿದ್ದ ಅತ್ತೆ ಒಂದು ದಿನ ಸೊಸೆಯನ್ನು ಹಿಂಬಾಲಿಸಿ ಬಂದಾಗ ದೇವಿಯ ಧ್ಯಾನದಲ್ಲಿ ಮಗ್ನಳಾಗಿದ್ದನ್ನು ಕಂಡು ಸಿಟ್ಟಿನಿಂದ ಮನೆಯ ಕೆಲಸಕ್ಕಿಂತ ದೇವಿಯ ದರ್ಶನ ನಿನಗೆ ಹೆಚ್ಚಾಯಿತೆ? ಎಂದು ಪಕ್ಕದಲ್ಲಿದ್ದ ಚಂದ್ರ ಬಟ್ಟಲನ್ನು ತೆಗೆದುಕೊಂಡು ತಲೆಗೆ ಕುಕ್ಕಿದ್ದರಿಂದ ನೋವು ತಾಳಲಾರದೆ ಅಮ್ಮ ಹಾಸನಾಂಬೆ ಎಂದು ಭಕ್ತಿಯಿಂದ ಕೂಗಿದಾಗ, ಭಕ್ತೆಯ ಕಷ್ಟ ನೋಡಲಾಗದೆ ದೇವಿ ಭಕ್ತೆಯನ್ನು ಮೆಚ್ಚಿ ಆಕೆಯನ್ನು ತನ್ನ ಸನ್ನಿಧಾನದಲ್ಲಿ ಕಲ್ಲಾಗಿಸಿಕೊಂಡಳು. ಅದೇ ಚಂದ್ರ ಬಟ್ಟಲಿನ ಶಿಲ್ಪ. ಪ್ರತಿ ವರ್ಷವೂ ಕಲ್ಲಾಗಿರುವ ಭಕ್ತಯು ಬತ್ತದ ಕಾಳಿನ ತುದಿಯಷ್ಟು ದೇವಿಯ ಕಡೆ ಚಲಿಸುವಳು. ಆಕೆ ದೇವಿಯ ಪಾದ ತಲುಪಿದ ಕೂಡಲೇ ಕಲಿಯುಗದ ಅಂತ್ಯವಾಗುತ್ತದೆ ಎನ್ನುವ ನಂಬಿಕೆ ಇದೆ.
ಇಲ್ಲಿಯ ಇನ್ನೊಂದು ವಿಶೇಷವೆಂದರೆ, ಹಾಸನಾಂಬೆಯು ಶಕ್ತಿ ದೇವತೆಯಾದರೂ ಸಹ ಇಲ್ಲಿ ಪ್ರಾಣಿ ಬಲಿ ನೀಡುವುದಿಲ್ಲ ಜೊತೆಗೆ ದೇವಿಯ ದರ್ಶನದ ಸಮಯದಲ್ಲಿ ಇಲ್ಲಿನ ಸುತ್ತಮುತ್ತಲಿನ ಮನೆಯಲ್ಲಿ ಖಾರದ ಪದಾರ್ಥ ಹಾಗೂ ಸಿಡಿಯುವ ಒಗ್ಗರಣೆ ಮಾಡುವುದಿಲ್ಲ.
ಹಾಸನಾಂಬೆ ಯಾರು?
ಸಪ್ತಮಾತೃಕೆಯಾದ ಹಾಸನಾಂಬೆ ಹಾಸನದಲ್ಲಿ ನೆಲೆಸಿರುವುದಕ್ಕೆ ದಂತ ಕತೆ ಇದ್ದಂತೆ ಸಪ್ತಮಾತೃಕೆಯರು ಯಾರು ಎನ್ನುವುದಕ್ಕೂ ಇದೆ.
ದೀಪಾವಳಿ ಬೆಳಕಿನ ಹಬ್ಬದ ಹಿನ್ನೆಲೆಯಲ್ಲಿ ಸಪ್ತಮಾತೃಕೆಯರ ಹುಟ್ಟಿನ ಗುಟ್ಟು ಇದೆ. ದೇವತೆಗಳ ಪ್ರಾರ್ಥನೆಯನ್ನು ಮನ್ನಿಸಿದ ಶಿವ ಬ್ರಹ್ಮನ ವರದಿಂದ ಉನ್ಮತ್ತನಾದ ಅಂಧಕಾಸುರನ ವಧೆಗೆ ಸಿದ್ಧನಾಗುತ್ತಾನೆ. ನೆಲಕ್ಕೆ ಬೀಳುವ ಅಂಧಕಾಸುರನ ರಕ್ತದ ಪ್ರತಿ ಹನಿಯಿಂದಲೂ ಇನ್ನೊಬ್ಬ ಅಂಧಕಾಸುರನು ಹುಟ್ಟುತ್ತಿರಲು, ಅವನ ರಕ್ತ ನೆಲಕ್ಕೆ ಬೀಳುವುದನ್ನು ತಡೆಯುವ ಸಲುವಾಗಿ ತನ್ನ ಬಾಯಿಯಿಂದ ಶಿವನು ಒಬ್ಬ ಶಕ್ತಿಯನ್ನು (ಯೋಗೇಶ್ವರಿ) ಸೃಷ್ಟಿಸಿದ. ತರ ದೇವತೆಗಳು ಶಿವನ ಸಹಾಯಕ ತಮ್ಮ ಶಕ್ತಿಯನ್ನು ಕಳುಹಿಸಿದರು. ಹೀಗೆ ಜನ್ಮತಾಳಿದವರೇ ಸಪ್ತಮಾತೃಕೆಯರು . ಈ ಸಪ್ತಮಾತೃಕೆಯರಲ್ಲಿ ಹಾಸನಾಂಬ ದೇವಿಯೂ ಒಬ್ಬಳಾಗಿದ್ದಾಳೆ.
ಕಳ್ಳಪ್ಪನ ಗುಡಿ
ದೇವಿಯ ಆಭರಣಗಳನ್ನು ಅಪಹರಿಸುವ ದುರಾಸೆಯಿಂದ ನಾಲ್ಕು ಜನ ಕಳ್ಳರು ಒಳ ನುಗ್ಗಿ ಆಭರಣಗಳಿಗೆ ಕೈ ಹಾಕಿದಾಗ ಕುಪಿತಳಾದ ದೇವಿ, ನಾಲ್ಕು ಮಂದಿ ಕಳ್ಳರಿಗೆ ಕಲ್ಲಾಗಿ ಹೋಗಿ ಎಂದು ಶಾಪ ಕೊಟ್ಟಳು. ಅದರ ಪರಿಣಾಮವಾಗಿ ಅ ನಾಲ್ಕು ಜನ ಕಳ್ಳರು ಕಲ್ಲಾದರು. ಕಳ್ಳರು ಕಲ್ಲಾಗಿರುವ ಗುಡಿಯನ್ನು ಕಳ್ಳಪ್ಪನ ಗುಡಿ ಎನ್ನಲಾಗಿದೆ.
ಹಾಲಪ್ಪನ ಗದ್ದಿಗೆ
ಕಳ್ಳಪ್ಪನ ಗುಡಿಯ ಪಕ್ಕದಲ್ಲೇ ಹಾಲಪ್ಪನ ಗದ್ದಿಗೆ ಇದೆ. ಇಲ್ಲಿ 5 ಅಡಿ ಉದ್ದದ ಒಂದು ಕಂಬವಿದೆ. ಇದನ್ನು ಹಾಲಪ್ಪನವರ ಗದ್ದಗೆ ಎಂದು ಕರೆಯುತ್ತಾರೆ.
ಶ್ರೀ ವೀರಭದ್ರ ಸ್ವಾಮಿ
ಹಾಲಪ್ಪನ ಗದ್ದಿಗೆಯ ಪಕ್ಕದಲ್ಲೇ ಸಪ್ತಮಾತೃಕೆಯರು ಇರುವಲ್ಲಿ ವೀರಭದ್ರಸ್ವಾಮಿ ಇರುವುದು ವಾಡಿಕೆ. ಈ ಗುಡಿಯಲ್ಲಿ ನಾಗರ ಕಲ್ಲುಗಳು ಸಹ ಇವೆ.
ದರ್ಬಾರ್ ಗಣಪತಿ
ಸಪ್ತಮಾತೃಕೆಯರು ಇರುವಲ್ಲಿ ಬಲ ಭಾಗದಲ್ಲಿ ಶ್ರೀ ವೀರಭದ್ರಸ್ವಾಮಿ ಎಡ ಭಾಗದಲ್ಲಿ ಗಣಪತಿಯನ್ನು ಇರಿಸಿ ಮಾತೃಗಣಗಳನ್ನಾಗಿರಿಸಬೇಕೆಂಬ ವಿಧಿಯಿದೆ. ಅದರಂತೆ ಇಲ್ಲಿ ದರ್ಬಾರ್ ಗಣಪತಿ ಇದೆ.
101 ಶಿವಲಿಂಗ
ದೇವಾಲಯದ ಆವರಣದಲ್ಲಿ 101 ಲಿಂಗವನ್ನು ಒಂದೇ ಸಲ ನೋಡುವ ಅವಕಾಶ ದೊರೆಯುತ್ತದೆ. ಈ ಗುಡಿಯ ಮೇಲ್ಭಾಗದಲ್ಲಿ 4 ಅಡಿ ಎತ್ತರದ ಇನ್ನೊಂದು ಮಹಾಲಿಂಗವಿದೆ.
ಸಿದ್ದೇಶ್ವರ ದೇವಾಲಯ
ಹಾಸನಾಂಬೆ ದೇವಾಲಯದ ದ್ವಾರವನ್ನು ಪ್ರವೇಶ ಮಾಡಿದರೆ ಕೂಡಲೇ ಸಿದ್ದೇಶ್ವರಸ್ವಾಮಿ ದೇವಾಲಯ ನೋಡಲು ಸಿಗುವುದು.
ಇದೊಂದು ಅಪರೂಪದ ದೇವಾಲಯವಾಗಿದೆ. ಪ್ರತಿಯೊಂದು ಶೈವ ದೇವಾಲಯದ ಗರ್ಭಗುಡಿಯಲ್ಲಿ ಶ್ರೀ ಸಿದ್ದೇಶ್ವರಸ್ವಾಮಿ (ಈಶ್ವರ) ಅರ್ಜುನನಿಗೆ ಪಾಶುಪತಾಸ್ತ್ರ ಕೊಡುವ ಆಕಾರದಲ್ಲಿದೆ.
ದೇವಾಲಯದ ಆವರಣವು ಆಧುನಿಕ ರೀತಿ ಇದೆ. ದೇವಾಲಯವು ಸಹ ನವೀಕರಣಗೊಂಡಿದೆ. ಗರ್ಭಗುಡಿಯಲ್ಲಿ 4 ಅಡಿ ಎತ್ತರ 4 ಅಡಿ ಉದ್ದವಾದ ಒಂದು ಕಲ್ಲು ಇದ್ದು ಅದರ ಮೇಲೆ ಉಬ್ಬು ಚಿತ್ರವಿದೆ. ಅದನ್ನು ಸಿದ್ದೇಶ್ವರ ದು ಕರೆಯುತ್ತಾರೆ. ಈ ಸಿದ್ದೇಶ್ವರ ಗರ್ಭಗುಡಿಯ ಮುಂದೆ 4 ಅಡಿ ಎತ್ತರದ ಬಸವಣ್ಣನ ವಿಗ್ರಹವಿದೆ. ಗರ್ಭಗುಡಿಯ ಪಕ್ಕದಲ್ಲಿ ಇನ್ನೊಂದು ಚಿಕ್ಕ ಗುಡಿ ಇದೆ. ಇದರಲ್ಲಿ ಗಣಪತಿ ವಿಗ್ರಹವಿದೆ. ಈ ದೇವಾಲಯ ದ್ವಿಕೂಟಬಲವಾಗಿದೆ. ಸಿದ್ದೇಶ್ವರ ಸ್ವಾಮಿಯ ದೇವಾಲಯದ ಮುಂದೆ ನಂದಿ ಕಂಬವಿದೆ. ಸಿದ್ದೇಶ್ವರ ದೇವಾಲಯದಲ್ಲಿ ದಿನಕ್ಕೆ ಎರಡು ಬಾರಿ ಪೂಜೆ ನಡೆಯುತ್ತದೆ.